Nanna Kaanavavane - ನನ್ನ ಕಾಣ್ವವನೇ






 

ನನ್ನ ಕಾಣ್ವವನೇ
ದಿನವೂ ಕಾಯ್ವವನೇ

ಪರಿಕ್ಷಿಸಿ ತಿಳಿದಿರುವೇ
ಸುತ್ತಲು ಆವರಿಸಿರುವೆ
ಕುಳಿತುಕೊಳ್ವದು ಎದ್ದೇಳ್ವದು
ಚೆನ್ನಾಗಿ ಅರಿತಿರುವೆ

ನನ್ನಾಸೆ ಬಯಕೆಗಳೆಲ್ಲಾ
ಸಂಪೂರ್ಣ ಅರಿತಿರುವೆ
ನಡೆಯೊದನ್ನು ನಾ ಮಲಗೋದನ್ನು
ಅಪ್ಪಾ ನೀ ಅರಿತಿರುವೆ

ಸ್ತೋತ್ರ ರಾಜಾ ಯೇಸು ರಾಜಾ - 2

ಹಿಂದೆ ಮುಂದೆ ನನ್ನನ್ನಾವರಿಸಿ
ನನ್ನ ಸುತ್ತುವರಿದಿರುವೆ
ನಿನ್ ಹಸ್ತದಿಂದ ದಿನವು ನನ್ನ
ಬಿಗಿಯಾಗಿ ಹಿಡಿದಿರುವೆ

ಗರ್ಭದಲ್ಲೆ ನನ್ನನ್ನು ಕಂಡು
ನನ್ ರಚನೆಯ ಗಮನಿಸಿದೆ
ಅದ್ಭುತವಾಗಿ, ವಿಚಿತ್ರವಾಗಿ
ನನ್ನನ್ನು ರೂಪಿಸಿದೆ


NONE




Song Description: Telugu Christian Song Lyrics, Nanna Kaanavavane - ನನ್ನ ಕಾಣ್ವವನೇ.
KeyWords: Christian Song Lyrics, Father Berchmans, Nanna Kaanavavane lyrics.